ಸುಪ್ರಭಾತ - ಈ ಹೃದಯ ಹಾಡಿದೆ

ವಿಕಿಸೋರ್ಸ್ ಇಂದ
Jump to navigation Jump to search

ಚಿತ್ರ: ಸುಪ್ರಭಾತ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಚಿ. ಉದಯಶಂಕರ್
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ

ಈ ಹೃದಯ ಹಾಡಿದೆ, ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ, ಸುಮವೆ ನಿನಗಿನ್ನು ಕೇಳದೆ
ಈ ಹೃದಯ ಹಾಡಿದೆ, ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ, ಸುಮವೆ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ, ಸುಮವೆ ನಿನಗಿನ್ನು ಕೇಳದೆ

ಕನಸು ಮನಸಲ್ಲಿ ಉಸಿರು ಉಸಿರಲ್ಲಿ ನಿನ್ನ ಚಿಂತೆ ತುಂಬಿದೆ
ಕನಸು ಮನಸಲ್ಲಿ ಉಸಿರು ಉಸಿರಲ್ಲಿ ನಿನ್ನ ಚಿಂತೆ ತುಂಬಿದೆ
ಗಾಳಿಯು ಬೀಸಲು, ಭ್ರಮೆ ಇಂದ ಅಲೆದಾಡಿದೆ
ಹಗಲು ಇರುಳಾಗಿ ಇರುಳು ಹಗಲಾಗಿ ದಿನ ರಾತ್ರಿ ಓಡಿದೆ
ಮರೆಯುವ ರೀತಿಯ, ನನ್ನಾಣೆ ನಾ ಕಾಣದೆ
ನೆನಪು ಎದೆಯಲ್ಲಿ ತುಳುಕಾಡಿದೆ

ಈ ಹೃದಯ ಹಾಡಿದೆ, ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ, ಸುಮವೆ ನಿನಗಿನ್ನು ಕೇಳದೆ
ಈ ಹೃದಯ ಹಾಡಿದೆ, ಆಸೆಗಳಾ ತಾಳದೆ

ಚಿಗುರು ಎಲೆಯಾಗಿ ಮೊಗ್ಗು ಹೂವಾಗಿ ಋತುಕಾಲ ಓಡಿದೆ
ಚಿಗುರು ಎಲೆಯಾಗಿ ಮೊಗ್ಗು ಹೂವಾಗಿ ಋತುಕಾಲ ಓಡಿದೆ
ತಡೆಯುವ ಶಕುತಿಯು, ನಿನ್ನಾಣೆ ನನಗಿಲ್ಲದೆ
ಕಡಲು ಮುಗಿಲಾಗಿ ಮುಗಿಲು ಮಳೆಯಾಗಿ ನದಿಯಾಗಿ ಓಡಿದೆ
ಬಯಕೆಯು ಮುಗಿಯದೆ, ಸುಖ ಶಾಂತಿ ನಾ ಕಾಣದೆ
ನಯನ ಕಣ್ಣೀರ ಹನಿಯಾಗಿದೆ

ಈ ಹೃದಯ ಹಾಡಿದೆ, ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ, ಸುಮವೆ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ, ಸುಮವೆ ನಿನಗಿನ್ನು ಕೇಳದೆ