ಸುರಿವ ಜಲಕ್ಕೆ ನೆಲೆ(ನೆಲ?) ಹೊಲೆಯೆಂದು ಪ್ರಮಾಣಿಸಬಹುದೆ ? ಉರಿವ ಅನಲಂಗೆ ಶತಡೊಂಕು ಸಸಿನವೆಂಬುದುಂಟೆ ? ಗುಹೇಶ್ವರಲಿಂಗಕ್ಕೆ ಲೇಸು ಕಷ್ಟವೆಂಬುದಿಲ್ಲ ಸಂಗನಬಸವಣ್ಣಾ.