ಸುರೆಯ ತುಂಬಿದ ಭಾಂಡವನು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸುರೆಯ ತುಂಬಿದ ಭಾಂಡವನು ಎನಿಸು ವೇಳೆ ಜಲದಿ ತೊಳೆದಡೇನು ಒಳಗೆ ಶುದ್ಧವಾಗಬಲ್ಲುದೆ ? ಬಾಹ್ಯದ ಜಲತೀರ್ಥದಲ್ಲಿ ಮುಳಿ ಮುಳಿಗಿ ಎದ್ದಡೇನು ಅಂತರಂಗದ ಮಲಿನತ್ವವು ಮಾಂಬುದೆ ಹೇಳಾ ಚಿತ್ತೇತ್ವಂತರ್ಗತಂ zõ್ಞಷ್ಟ್ಯಂ ತೀರ್ಥಸ್ನಾನೈರ್ನ ಶುದ್ಧ್ಯತಿ ಶತಶೋsಪಿ ಜಲೈzsõ್ರ್ಞತಂ ಸುರಾಭಾಂಡಮಿವಾಶುಚಿಃ ಎಂದುದಾಗಿ ಚಿದಾಕಾಶವನೊಳಕೊಂಡ ಶಿವಜ್ಞಾನಿಗಳ ಪಾದೋದಕವ ಪಡೆದು
ಭಕ್ತರು ಭವರಹಿತರಾದರು ಕಾಣಾ ಕೂಡಲಚೆನ್ನಸಂಗಮದೇವಾ.