ಸುರೆಯ ತೊರೆ ಮಾಂಸದ ಒಟ್ಟಿಲು ಭಂಗಿಯ ಬಣಬೆ ಜಾಯಿಕಾಯಿ ಜಾಯಿಪತ್ರೆಯ ತಿಂಬ ಹಿರಿಯರ ಹರಿಕಾರರ ಜಂಗಮವೆಂದಡೆ ನಾಯಕನರಕ ತಪ್ಪದು ಕೂಡಲಚೆನ್ನಸಂಗಮದೇವಾ.