ಸೂಳೆಯ ಮಗ ಮಾಳವಪಾಳ್ಯದೊಳಗೆಲ್ಲಾ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸೂಳೆಯ ಮಗ ಮಾಳವಪಾಳ್ಯದೊಳಗೆಲ್ಲಾ
ತಮ್ಮಪ್ಪನ ಕಾಣದೆ ಅರಸುತೈದಾನೆ. ಆಳೆಂದರಿಯ
ಅರಸೆಂದರಿಯ. `ಬಹುಲಿಂಗಪೂಜಕಶ್ಚೈವ ಬಹುಭಾವಗುರುಸ್ತಥಾ ಬಹುಪ್ರಸಾದಂ ಭುಂಜತೇ ವೇಶ್ಯಾಪುತ್ರಸ್ತಥೈವ ಚ ಎಂದುದಾಗಿ ಮತಿಹೀನ ಕಾಳಮೂಳರಿಗೆ ಶಿವಭಕ್ತಿ ದೊರೆಯದು
ಆಣೆ ನಿಮ್ಮಾಣೆ ಕೂಡಲಚೆನ್ನಸಂಗಮದೇವಾ.