ಸೊಕ್ಕಿದ ಬಳಕುವ ಜವ್ವನದ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸೊಕ್ಕಿದ ಜವ್ವನದ
ಕಕ್ಕಸಕುಚದ
ಸಡಲಿದ ಸೋರ್ಮುಡಿಯ
ಬಡನಡುವಿನ
ಬಳಕುವ ಹೆಣ್ಣಿನ ಕಡುಸ್ನೇಹವನಗಲಿ ಕಡೆಗೆ ಹೋಗುವುದು
ಇದು ಎಂಥ ವಿಗಡ ಚಾರಿತ್ರವೆ ಅವ್ವಾ! ಅಖಂಡೇಶ್ವರನೆಂಬ ನಲ್ಲನ ಚಿಂತೆಯಿಂದೆ
ಮನವು ಸಣ್ಣಿಸಿ
ತನುವು ಕರಗಿ ಹೋಯಿತ್ತು ನೋಡಿರವ್ವಾ.