ಸೋಮನಾಳದಲ್ಲಿ ಶುಭ್ರ ಕಳೆ,
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಸೋಮನಾಳದಲ್ಲಿ ಶುಭ್ರ ಕಳೆ
ಪಿಂಗಳನಾಳದಲ್ಲಿ ಸುವರ್ಣಕಳೆ
ಸುಷುಮ್ನನಾಳದಲ್ಲಿ ಸುಜ್ಞಾನಜ್ಯೋತಿಯ ಬೆಳಗು ನೋಡಾ. ಏಳುನೂರೆಪ್ಪತ್ತು ನಾಳದಲ್ಲಿ ಹೊಳೆವುತ್ತಿಹ ಕಾಲಾಗ್ನಿ ಕಾಂತಿ. ನೀಲಲೋಹಿತನ ಪ್ರಸಾದದುದಯ ತುದಿಮೊದಲಿಲ್ಲ ನೋಡಾ. ಆದಿ ಮಧ್ಯಾವಸಾನವಿಲ್ಲದ ಪ್ರಮಾಣ ಪ್ರಸಾದದಲ್ಲಿ ನಿಷ್ಪತಿಯಾಗಿ ನಿಜಲಿಂಗೈಕ್ಯನಾದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.