ವಿಷಯಕ್ಕೆ ಹೋಗು

ಸೋರುತಿಹುದು ಮನೆಯ ಮಾಳಿಗಿ

ವಿಕಿಸೋರ್ಸ್ದಿಂದ

ಸೋರುತಿಹುದು ಮನೆಯ ಮಾಳಿಗಿ

[ಸಂಪಾದಿಸಿ]
  • ದೇಹ ಮನಸ್ಸು ದಣಿದಿದೆ ಸತ್ಯ-ಸಾಕ್ಷಾತ್ಕಾರ ಆಗುವುದೋ ಹೇಗೆ ಎನ್ನುವ ಚಿಂತೆ- ಆಗ ಹುಬ್ಬೆ ಮಳೆ ಬಂದು ಸತ್ಯ ಗೋಚರವಾಯಿತು. ಇಲ್ಲಿ ಹುಬ್ಬು (ಹುಬ್ಬೆ ಬದಲಿಗೆ) ಮಳೆ = ಭ್ರೂ ಮದ್ಯದಲ್ಲಿ ಮನ ನಿಶ್ಚಲತೆಯ ಹೊಂದಿದ ಸೂಚನೆ ಇರಬಹುದು.

ಸೋರುತಿಹುದು ಮನೆಯ ಮಾಳಿಗಿ
ಅಜ್ನಾನದಿಂದ
ಸೋರುತಿಹುದು ಮನೆಯ ಮಾಳಿಗಿ.||ಪಲ್ಲವಿ||
 
ಸೋರುತಿಹುದು ಮನೆಯ ಮಾಳಿಗಿ
ದಾರು ಗಟ್ಟಿ ಮಾಳ್ಪರಿಲ್ಲ
ಕಾಳ ಕತ್ತಲೆಯೊಳಗೆ ನಾನು
ಮೇಲಕೇರಿ ಹೋಗಲಾರೆ. ೧ ||ಪಲ್ಲವಿ||
 
ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರುಕು ಚಪ್ಪರ ಜೇರುಗಿಂಡಿ
ಮೇಲಕೇರಿ ಹೋಗಲಾರೆ. ೨ ||ಪಲ್ಲವಿ||
 
ಕರಕಿ ಹುಲ್ಲು ಕಸವು ಹತ್ತಿ
ಹರಿದು ಸಾಲು ಇರಬಿ ಮುತ್ತಿ
ಜಲದ ಭರದಿ ಸರಿಯೆ ಮಣ್ಣು
ಒಳಗೆ ಹೊರಗೆ ಏಕವಾಗಿ. ೩ ||ಪಲ್ಲವಿ||
 
ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬು ಮಳೆಯು
ಎಂತೊ ಶಿಶುನಾಳಧೀಶನ ತಾನು
ನಿಂತು ಪೊರೆವನು ಎಂದು ನಂಬಿದೆ. ೪ ||ಪಲ್ಲವಿ||

ಶರೀಫ ಸಾಹಿತ್ಯ

ಉಲ್ಲೇಖ

[ಸಂಪಾದಿಸಿ]
  • ಶಿಶುನಾಳ ಶರೀಫರ ಪದಗಳು -ಅನಾಮಿಕ