ಸ್ಥಲದಿಂದ ನಡೆನುಡಿಯಾಯಿತ್ತು, ನಿಃಸ್ಥಲದಿಂದ
ಗೋಚರ
ಲೇಖಕರು: ChennaBasavanna
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಸ್ಥಲದಿಂದ ನಡೆನುಡಿಯಾಯಿತ್ತು
ನಿಃಸ್ಥಲದಿಂದ ನುಡಿನಡೆಗೆಟ್ಟಿತ್ತು. ನೋಡಲೊಡನೆ ಸ್ಥಲವಾಗಿ ತೋರಿತ್ತು
(ಆರಯ್ಯಲೊಡನೆ ನಿಃಸ್ಥಲವಾಗಿ ತೋರಿತ್ತು.) ಸ್ಥಲವೂ ಅಲ್ಲ
ನಿಃಸ್ಥಲವೂ ಅಲ್ಲ
ನೋಟವೆ ಕೂಟ
ಕೂಡಲಚೆನ್ನಸಂಗಾ