ಸ್ಫಟಿಕದ ಘಟದಂತೆ ಒಳಹೊರಗಿಲ್ಲ ನೋಡಾ ! ವಿಗಡಚರಿತ್ರಕ್ಕೆ ಬೆರಗಾದೆನು. ನೋಡುವಡೆ ಕಾಣಬರುತ್ತಿದೆ
ಮುಟ್ಟುವಡೆ ಕೈಗೆ ಸಿಲುಕದು ಹೊದ್ದುವಡೆ ಸಮೀಪ
ಸಾರಿದಡೆ ಅತ್ತತ್ತ ತೋರುತ್ತಿದೆ. ಆಕಾರ ನಿರಾಕಾರವ ನುಂಗಿ ಬಯಲ ಸಮಾಧಿಯಲ್ಲಿ ಸಿಲುಕಿತ್ತು ನೋಡಾ ! ದರ್ಶನದಿಂದ ಅಮೃತಾಹಾರವಾಯಿತ್ತು
ಬೆರಸಿದಡೆ ಇನ್ನೆಂತೊ ಗುಹೇಶ್ವರಾ !