ಸ್ವಯಮಜ್ಜನ, ಸ್ವಯಪೂಜೆ, ಸ್ವಯಾರೋಗಣೆ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಸ್ವಯಮಜ್ಜನ
ಸ್ವಯಪೂಜೆ
ಸ್ವಯಾರೋಗಣೆ_ ನಾ ನೀನೆಂಬ ಸಂಶಯ ನಿಂದ ನಿಲವೆಂತಿದ್ದಿತೆಂದರೆ: [ಪ್ರ]ಪಂಚ ಪರತಂತ್ರವ ಮೀರಿ
ಭಾವವ ಬಿಟ್ಟು
ಘನರವಿಲೋಚನನಾಗಿ
ಅರ್ಪಿತವೆ (ಭುಂಜಿತ)
ಅನರ್ಪಿತವೆ ಅಭುಂಜಿತ
ಸ್ಥೂಲ ಸೂಕ್ಷ್ಮ ಘನನಿತ್ಯವೆಂದರಿಯರು
ಜಡವೇಷಲಾಂಛನಧಾರಿಗಳು. ಕಾಯ ಜೀವ ಪ್ರಸಾದವಂ ಬಿಟ್ಟು ಸರ್ವಭಾವ ರುಚಿ ಪ್ರಸಾದಿ
ಕೂಡಲಚೆನ್ನಸಂಗಯ್ಯಾ ಆತ ಸರ್ವಾಂಗಪ್ರಸಾದಿ.