ಸ್ವರವೆಂಬ ಕುದುರೆಗೆ ವಿಷ್ಣುವೆಂಬ ಕಡಿವಾಣ ಸೂರ್ಯ ಚಂದ್ರರೆಂಬ ಅಂಕಣಿ ಬ್ರಹ್ಮನೆ ಹಲ್ಲಣ ಸುರಾಳವೆಂದಲ್ಲಿ ನಿರಾಳವಾಯಿತ್ತು_ಗುಹೇಶ್ವರನೆಂಬ ರಾವುತಂಗೆ.