ಹಜ್ಜೆಯುಳ್ಳ ಮೃಗ ಇಬ್ಬರ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಹಜ್ಜೆಯುಳ್ಳ ಮೃಗ ಇಬ್ಬರ ಕೂಡಿ ಹಲಬರ ನೆರಹಿ ಹಬ್ಬವ ಮಾಡುವ ಭರವಸ ಉಬ್ಬರವೆಂಬುವದನೊಬ್ಬರು ಅರಿಯರು ನೋಡಾ. ಹಜ್ಜೆಯಿಲ್ಲದ ಮೃಗ ಇಬ್ಬರ ಕೂಡದು
ಹಲಬರ ನೆರಹದು
ಹಬ್ಬವನೊಲ್ಲದು. ತಾನೊಬ್ಬನೆಯಾಯಿತ್ತು ನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನ ಶರಣ ಸ್ವತಂತ್ರ ಕಾಣಿರೋ.