ಹರನ ಸದಾಚಾರವೆಂಬುದು ನಿರೂಪದಿಂದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹರನ ನಿರೂಪದಿಂದ ಧರೆಗೆ ಬಸವಣ್ಣನವತರಿಸಿದ ಕಾರಣ
ಶಿವಾಚಾರ ಸದಾಚಾರವೆಂಬುದು ಧರೆಗೆ ವಿಖ್ಯಾತವಾಯಿತ್ತು. ಶಿವಗಣ ಪ್ರಮಥಗಣಂಗಳೆಂಬ ಮಹಾಮಹಿಮರ ಸುಳುಹು
ಧರೆಯ ಮೇಲೆ ಕಾಣಬಂದಿತ್ತು ನೋಡಯ್ಯಾ. ಪರುಷವ ಸಾಧಿಸಿದಂತಾಯಿತ್ತು
ನಿಮ್ಮ ಶರಣರ ಸಂಗದಿಂದ. ಎನ್ನ ನಂದಿಯ ಮೊಗವಾಡ
ನೊಸಲಕಣ್ಣುಂಟೆಂಬ ಅಹಂಕಾರವ ಮುಂದುಗೊಂಡಿದ್ದೆನಯ್ಯಾ. ಎನ್ನ ಮದ ಉಡುಗಿ
ಸಂಗನಬಸವಣ್ಣನ ಕರುಣದಿಂದ ಪ್ರಭುದೇವರೆಂಬ ನಿರಾಳವ ಕಂಡು ಬದುಕಿದೆನು ಕಾಣಾ
ನಿಜಗುರು ಶಂಕರದೇವಾ.