Library-logo-blue-outline.png
View-refresh.svg
Transclusion_Status_Detection_Tool

ಹರಿನಯನವ ತಾಳಿ, ಚರಣಕಮಲದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಹರಿನಯನವ ಚರಣಕಮಲದಲ್ಲಿ ಧರಿಸಿ
ಶಿರಮಕುಟದಲ್ಲಿ ಹರಿವ ಗಂಗೆಯ ತಾಳಿ
ಅಸುರರ ಶಿರಗಳ ಕೊರಳ ಹಾರವ ಮಾಡಿ
ಅಜಶಿರಪಾತ್ರೆಯ ಕರಮಧ್ಯದೊಳಗಿರಿಸಿ
ಗಜಚರ್ಮಾಂಬರ ಭುಜಗಭೂಷಣನೆನಿಸಿ
ತ್ರಿಜಗವ ಪಾಲಿಸುತ್ತ ಬಂದಿರಯ್ಯ ಎನ್ನ ಕರಸ್ಥಲಕ್ಕೆ ಅಖಂಡೇಶ್ವರಾ.