ಹರಿಯ ಹೇಳಿಗೆಯಲ್ಲಿ ಮಾರ್ಜಾಲ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹರಿಯ ಹೇಳಿಗೆಯಲ್ಲಿ ಮಾರ್ಜಾಲ ಮೂಷಕನ ಹಡೆದುದ ಕಂಡೆನಯ್ಯ. ಕರಿಯ ಬೇಡನ ಕೈವಿಡಿದು
ರಾಹುಕೇತುಗಳಾಗಿ ಚಂದ್ರಸೂರ್ಯರ ಕೊರೆಕೂಳನುಂಡು ಧರೆಯಾಕಾಶಕ್ಕೆ ಶರೀರವಿಲ್ಲದೆ ಎಡೆಯಾಡುವುದ ಕಂಡೆ. ಸಿರಿವರ ವಾಣಿಪತಿಯೆಂಬವರ ತನ್ನ ಹೊರೆಯಲ್ಲಿಕ್ಕಿ ಆಳಿ ಮನುಮುನೀಶ್ವರರ ಮರೆದೊರಗಿಸಿದ್ದ ಕಂಡೆ. ಇದರ ನೆಲೆಯನರಿದು
ಹೊಲಬ ತಿಳಿದುಕೊಳಬಲ್ಲಾತನಲ್ಲದೆ ಲಿಂಗೈಕ್ಯನಲ್ಲ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.