ಹಲಬರ ನುಂಗಿದ ಹಾವಿಂಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಹಲಬರ ನುಂಗಿದ ಹಾವಿಂಗೆ ತಲೆ ಬಾಲವಿಲ್ಲ ನೋಡಾ; ಕೊಲುವುದು ತ್ರೈಜಗವೆಲ್ಲವ
ತನಗೆ ಬೇರೆ ಪ್ರಳಯವಿಲ್ಲ. ನಾಕಡಿಯನೈದೂದು
ಲೋಕದ ಕಡೆಯನೆ ಕಾಬುದು
ಸೂಕ್ಷ್ಮಪಥದಲ್ಲಿ ನಡೆವುದು
ತನಗೆ ಬೇರೆ ಒಡಲಿಲ್ಲ. ಅಹಮೆಂಬ ಗಾರುಡಿಗನ ನುಂಗಿತ್ತು ಕೂಡಲಸಂಗನ ಶರಣರಲ್ಲದುಳಿದವರ.