ಹಸಿವು ತೃಷೆಯಂಡಲೆಯಾವರಿಸಿ ಕುಸಿವುತಿರ್ಪುದು ನೋಡಾ ತನುವು. ವಿಷಯವಿಕಾರದಂಡಲೆಯಾವರಿಸಿ ದೆಸೆದೆಸೆಗೆ ನುಸುಳುತಿಪ್ಪುದು ನೋಡಾ ಮನವು. ಈ ತನುಮನದಲ್ಲಿ ಮುಸುಕಿದ ಮಾಯಾವಾಸನೆಯ ಕಳೆದು ನಿಮ್ಮ ಭಕ್ತಿಯ ಲೇಸು ತೋರಿಸಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.