ಹಸಿವು ಹರಿದು, ತೃಷೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹಸಿವು ಹರಿದು
ತೃಷೆ ಬತ್ತಿ
ಪರಿಣಾಮವೆ ಪಥ್ಯವಾಗಿ ನಿಂದಂಗ ನೀನಾದ ಕಾರಣ
ನಿನ್ನ ಕಾರುಣ್ಯಚಕ್ಷು ಎನ್ನ ನಿರೀಕ್ಷಿಸಿದಲ್ಲಿ
ಎನ್ನ ಬಂಧ ಮೋಕ್ಷವೆಂಬುವು ಅಂದೆ ನಿಂದವು. ಕೂಡಲಚೆನ್ನಸಂಗಮದೇವರಲ್ಲಿ ಪ್ರಭುದೇವರ ಸುಳುಹು ಗೋಪ್ಯವಾಯಿತ್ತು.