ಹಸು ಹಯನಾಯಿತ್ತು, ಹಸು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹಸು ಹಯನಾಯಿತ್ತು
ಹಸು ಮನೆಗೆ ಬಂದಿತ್ತು
ಹಸುವ ಕಟ್ಟುವರೆಲ್ಲರ ಕಟ್ಟಿ
ಕಟ್ಟ ಬಂದವರ ಒಕ್ಕಲಿಕ್ಕಿ [ತು]ಳಿಯಿತ್ತು. ನಮ್ಮ ಕೂಡಲಚೆನ್ನಸಂಗಮದೇವರಲ್ಲಿ ಹಸುವ ಕಟ್ಟಿದಾತ ನಮ್ಮ ಸಿದ್ಧರಾಮಯ್ಯದೇವರೊಬ್ಬರೆ.