ಹಸೆ ಹಂದರವನಿಕ್ಕಿ, ತೊಂಡಿಲ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹಸೆ ಹಂದರವನಿಕ್ಕಿ
ತೊಂಡಿಲ ಬಾಸಿಗವ ಕಟ್ಟಿ
ಮದುವೆಯಾದೆನಲ್ಲಾ ನಾನು; ಮಚ್ಚಿ ಮದುವೆಯಾದೆನಲ್ಲಾ ನಾನು. ಗಂಡನೆ
ನಿನಗೋತು ಕೈವಿಡಿದವಳನು ಮತ್ತೊಬ್ಬರು ಕೈವಿಡಿದರೆ ನಿನ್ನಭಿಮಾನವ ಪರರೆಳದೊಯಿದಂತೆ ಕಾಣಾ ಚೆನ್ನಮಲ್ಲಿಕಾರ್ಜುನಾ.