ವಿಷಯಕ್ಕೆ ಹೋಗು

ಹಾಡಿದರೆ ಸದ್ಭಕ್ತಸ್ತ್ರೀಯರ ಹಾಡುವೆನಯ್ಯ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಹಾಡಿದರೆ ಹಾಡುವೆನಯ್ಯ ಶಿವಶರಣರ ಮನವೊಲಿದು. ನೋಡಿದರೆ ನೋಡುವೆನಯ್ಯ ಸದ್ಭಕ್ತಸ್ತ್ರೀಯರ ಎನ್ನ ಹೆತ್ತ ತಾಯಿಗಳೆಂದು. ಬೇಡಿದರೆ ಬೇಡುವೆನಯ್ಯ ಎನ್ನ ಶ್ರೀಗುರುವಿನಲ್ಲಿ ನಿತ್ಯ ನಿಜಮುಕ್ತಿಯ. ಕೂಡಿದರೆ ಕೂಡುವೆನಯ್ಯ ಅಖಂಡೇಶ್ವರಾ
ನಿಮ್ಮ ಶ್ರೀಚರಣವನೊಡಗೂಡುವ ಅವಿರಳ ಸಮರಸಭಕ್ತಿಯಲ್ಲಿ.