ಹಿಡಿದುದ ಬಡತನ ಬಿಡುವವನಲ್ಲ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹಿಡಿದುದ ಬಿಡುವವನಲ್ಲ ; ಬಿಟ್ಟುದ ಹಿಡಿವವನಲ್ಲ. ನಡುಮಧ್ಯದಲ್ಲಿ ಬಡತನ ಎಡರು ಕಂಟಕ ಬಂದಲ್ಲಿ
ಕಡುದುಃಖಿಯಾಗಿ ಬಳಲುವವನಲ್ಲ. ಅಡಿಗಡಿಗೆ ಲಿಂಗಪೂಜೆಯ
ಅಡಿಗಡಿಗೆ ಜಂಗಮದಾಸೋಹವ ಮರೆವವನಲ್ಲ
ಇದು ಕಾರಣ ಅಖಂಡೇಶ್ವರಾ
ನಿಮ್ಮ ಮಹೇಶ್ವರನ ಚಾರಿತ್ರವು ಇಹಲೋಕದೊಳಗಿಲ್ಲಾ.