ಹೀಂಗೆಂದರಿಯದೆ ತಾ ನಡೆದೆನೆಂದು
ತಾ ನುಡಿದೆನೆಂದು
ತಾ ವಾಸಿಸಿದೆನೆಂದು
ತಾ ರುಚಿಸಿದೆನೆಂದು
ತಾ ಸೋಂಕಿದೆನೆಂದು
ತಾ ಕೇಳಿದೆನೆಂದು
ತಾನೆ ನೆನೆದೆನೆಂದು
ತಾನೆಂಬುದನೆ ಮುಂದುಮಾಡಿಕೊಂಡು
ಲಿಂಗವೆಂಬುದನೆ ಹಿಂದುಮಾಡಿಕೊಂಡು
ಭೋಗಿಸುವ ಭೋಗವೆಲ್ಲವು
ಅಂಗಭೋಗ ಕಾಣಿರೋ. ಅಂಗದಿಚ್ಛೆಗೆ ಉಂಡು ಲಿಂಗಕ್ಕೆಂಬ ಆಧಮಜೀವಿಗಳೇನೆಂಬೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.