ಹುಟ್ಟದ ಯೋನಿಯಲ್ಲಿ ಹುಟ್ಟಿಸಿ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹುಟ್ಟದ ಯೋನಿಯಲ್ಲಿ ಹುಟ್ಟಿಸಿ
ಬಾರದ ಭವಂಗಳಲ್ಲಿ ಬರಿಸಿ
ಉಣ್ಣದ ಊಟವನುಣಿಸಿ ವಿಧಿಗೊಳಗಾಗಿಸುವ ಕೇಳಿರಣ್ಣಾ. ತನ್ನವರೆಂದಡೆ ಮನ್ನಿಸುವನೆ ಹತ್ತರಿದ್ದ ಭೃಂಗಿಯ ಚರ್ಮವ ಕಿತ್ತೀಡಾಡಿಸಿದವನು ಮತ್ತೆ ಕೆಲಂಬರ ಬಲ್ಲನೆ? ಇದನರಿತು ಬಿಡದಿರು ಬಿಡದಿರು. ಚೆನ್ನಮಲ್ಲಿಕಾರ್ಜುನನಿಂತಹ ಸಿತಗನವ್ವಾ.