ಹುಟ್ಟಿದಲ್ಲಿಯೆ ಹೊಂದುವುದೆಲ್ಲರಿಗೆಯೂ ಸ್ವಭಾವ. ಪುಣ್ಯಪಾಪವೆಲ್ಲರಿಗೆಯೂ ಸ್ವಭಾವ. ಮಹಾಶಿವತತ್ವದಲ್ಲಿ ಹುಟ್ಟಿದ ಶಿವಭಕ್ತರು ಆಗಮತತ್ವದಲ್ಲಿ ಹೊಂದಿದಡೇನು ? ಆ ಪುಣ್ಯಪಾಪವಿಲ್ಲಾಗಿ ಅವರು ಮಹಾನುಭಾವರು. ಆದಡೇನು? ಲೋಕದ ಪರಿಯೆ ?_ಅಲ್ಲ. ಇದ ಲೋಕದ ಪರಿಯೆಂಬ ಅಜ್ಞಾನಿಗಳನೇನೆಂಬೆ ಗುಹೇಶ್ವರಾ.