ಹುಟ್ಟಿದ ನೆಲೆಯ ತೃಷೆ ಬಿಡದವರಿಗೆ ಉದಕಲಿಂಗದ ಅನುಭಾವವೇಕೊ? ಮಾತಿನ ಮಾತಿನ ಮಹಂತರು ಹಿರಿಯರು ! ಗುಹೇಶ್ವರನೆಂಬ ಲಿಂಗಸಾರಾಯ ತೋರದು ತೋರದು ಬಹುಮುಖಿಗಳಿಗೆ.