ಹುಟ್ಟುವಲ್ಲಿ ಭವಿ, ಮರಳಿ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಹುಟ್ಟುವಲ್ಲಿ ಭವಿ
ಮರಳಿ ಭಕ್ತನ ಮಾ[ಡೆ]
ಪೂರ್ವಾಶ್ರಯವ ಕಳೆದು
ಹೊಂದುವಲ್ಲಿ ಭವಿಯಾಗಿ ಹೋಹರ ಮುಟ್ಟಲಾಗದು. ಅವನ ಮುಟ್ಟಿದವ ಮುನ್ನವೆ ವ್ರತಗೇಡಿ. ಅವನ ಶ್ರಾದ್ಧಕಾಲವೆ ಶ್ವಾನಮಾಂಸ
ಕ್ರಿಯಾಕಾಲವೆ ಕ್ರಿಮಿಗಳು
ತದ್ದಿನವೆ ಮದ್ಯಮಾಂಸ. ಇದು ಕಾರಣ
ಕೂಡಲಸಂಗಮದೇವಾ
ಅವನ ಮನೆಯ ವಿಚಾರಿಸದೆ ಹೊಕ್ಕವಂಗೆ ನಾಯಕನರಕ.