ಹುಲಿಯಬಾಯಲ್ಲಿ ಸಕಲ ಸಿಲ್ಕಿದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹುಲಿಯಬಾಯಲ್ಲಿ ಸಿಲ್ಕಿದ ಹುಲ್ಲೆಯಂತೆ
ಸರ್ಪನಬಾಯಲ್ಲಿ ಸಿಲ್ಕಿದ ಕಪ್ಪೆಯಂತೆ
ಸಕಲ ಲೋಕಾದಿಲೋಕಂಗಳು ಮಾಯೆಯಬಲೆಯಲ್ಲಿ ಸಿಲ್ಕಿ
ಸೆರೆಹೋಗುವುದ ಕಂಡು ನಾನಂಜಿ ನಿಮ್ಮ ಮೊರೆಹೊಕ್ಕೆ
ಕಾಯಯ್ಯ ಕಾರುಣ್ಯನಿದ್ಥಿಯೇ ಅಖಂಡೇಶ್ವರಾ.