ಹುಸಿ ಕಳವು ಪರದಾರ ಪರಹಿಂಸೆಯ ಬಿಟ್ಟು ಲೋಕದ ನಚ್ಚು ಮಚ್ಚು ಸುಟ್ಟು ಸಚ್ಚಿದಾನಂದಲಿಂಗದಲ್ಲಿ ಮನವು ಬೆಚ್ಚಂತಿರ್ಪ ಅಚ್ಚ ಮಹೇಶ್ವರರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.