ಹೂ-ಮಿಡಿಯ ಹರಿದು ಹಣ್ಣ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹೂ-ಮಿಡಿಯ ಹರಿದು ಹಣ್ಣ ಮಾಡಿಹೆನೆಂದಡೆ ಫಲಕಾರ್ಯಂಗಳಪ್ಪುವೆ ದೇವಾ ? ಶಶಿಧರನಟ್ಟಿದ ಬೆಸನದೊಳಗೆ ಎವೆ ಮಾತ್ರ ಪ್ರಮಾಣವೆ ಪೂರೈಸಲು ? ಲಿಂಗಪ್ರಾಣ ಪ್ರಾಣಲಿಂಗದ ಭೇದವ ನೆಟ್ಟನೆ ತಿಳಿದಲ್ಲದೆ
ಸಂಗಮನಾಥ `ನೀ ಬಾರಾ' ಎಂದು ಎತ್ತಕೊಳ್ಳನು. ಕೂಡಲಚೆನ್ನಸಂಗಯ್ಯಂಗೆ ಸವೆಯದ ಮುನ್ನ ಸಯವಾಗಲುಂಟೆ ? ಹೇಳಾ ಸಂಗನಬಸವಣ್ಣಾ.