ಹೃತ್ಕಮಲಕರ್ಣಿಕೆಯ ಕುಹರದಲೊಮ್ಮೆ ಪೃಥಗ್ಭಾವದಿಂದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹೃತ್ಕಮಲಕರ್ಣಿಕೆಯ ಕುಹರದಲೊಮ್ಮೆ ಪೃಥಗ್ಭಾವದಿಂದ ನೋಡಿ ಕಾಬನೆ ಶರಣನು ? ವಕ್ತ್ರಶ್ರಯದ ಜಿಹ್ವೆಯ ಕೊನೆಯಲ್ಲಿ ಪರವಕ್ತ್ರನಾಗಿ ನೋಡಿ ನುಡಿವನೆ ಶರಣನು ? ಪ್ರಕೃತಿ ತನುಗುಣರಹಿತ
ಸುಕೃತ ಶೂನ್ಯ
ಘನಮುಗ್ಧ ಮಹಂತ
ಕೂಡಲಚೆನ್ನಸಂಗಾ ಲಿಂಗೈಕ್ಯನು.