ಹೃದಯಕಮಲಕರ್ಣಿಕಾವಾಸದಲ್ಲಿ ದಿಟಪುಟಜಾÕನ ಉದಯವಾಗಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹೃದಯಕಮಲಕರ್ಣಿಕಾವಾಸದಲ್ಲಿ ದಿಟಪುಟಜಾÕನ ಉದಯವಾಗಿ ದ್ಥಿಕ್ಕರಿಸಲಾಗಿ
ಸಟೆ ದೂರವಾಗಿ ವಿವರ್ಜಿತವಾದವು ನೋಡಾ. ಕುಟಿಲ ಕುಹಕ ಆಟಮಟ ಅಭ್ರಚ್ಛಾಯವಳಿದು ಹೋಗದ ಮುನ್ನ
ಸ್ಫಟಿಕ ಪ್ರಜ್ವಲಾಕಾರವಾಯಿತ್ತು ನೋಡಾ. ಆ ಶಿವಜಾÕನಪ್ರಭೆಯೊಳಗೆ ನಿಟಿಲಲೋಚನನೆಂಬ ನಿತ್ಯನ ಕಂಡು
ಅದೇ ಎನ್ನ ನಿಜವೆಂದು ಬೆರಸಿ ಅಬ್ಥಿನ್ನಸುಖಿಯಾಗಿರ್ದೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.