ಹೃದಯದಲ್ಲಿರ್ಪ ಮಹಾಲಿಂಗದ ಬೆಳಗಿನಿಂದ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಹೃದಯದಲ್ಲಿರ್ಪ
ಮಹಾಲಿಂಗದ
ಬೆಳಗಿನಿಂದ
ನಾಸಿಕೆಯಲ್ಲಿ
ಆಚಾರಲಿಂಗವ
ಕಂಡೆನಯ್ಯಾ.
ಜಿಹ್ವೆಯಲ್ಲಿ
ಗುರುಲಿಂಗವ
ಕಂಡೆನಯ್ಯಾ.
ನೇತ್ರದಲ್ಲಿ
ಶಿವಲಿಂಗವ
ಕಂಡೆನಯ್ಯಾ.
ತ್ವಕ್ಕಿನಲ್ಲಿ
ಜಂಗಮಲಿಂಗವ
ಕಂಡೆನಯ್ಯಾ.
ಭಾವದಲ್ಲಿ
ಮಹಾಲಿಂಗವ
ಕಂಡೆನಯ್ಯಾ.
ಇಂತೀ
ಷಡ್ವಿಧಲಿಂಗವನು
ಎನ್ನ
ಸರ್ವಾಂಗದಲ್ಲಿ
ಕಂಡು
[ಮಹಾಲಿಂ]ಗವಾದೆನು
ಕಾಣಾ
ಗುಹೇಶ್ವರಾ.