ಹೆಣ್ಣಿನ ರೂಪು ಕಣ್ಣಿಗೆ
ಗೋಚರ
ಲೇಖಕರು: Tomtada Siddalingeshwara ShivaYogigaLu
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಹೆಣ್ಣಿನ ರೂಪು ಕಣ್ಣಿಗೆ ರಮ್ಯವಾಗಿ ತೋರುವದಿದು ಕರಣಂಗಳ ಗುಣ ಕಾಣಿರಣ್ಣ. ಕರಣದ ಕತ್ತಲೆಯ ಲಿಂಗಬೆಳಗನುಟ್ಟು ಕಳೆದು ಮುಕ್ಕಣ್ಣನೆ ಕಣ್ಣಾಗಿಪ್ಪ ಶರಣ ಬಸವಣ್ಣನ ಪಾದವ ತೋರಿಸಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.