ವಿಷಯಕ್ಕೆ ಹೋಗು

ಹೆಣ್ಣ ಬಿಟ್ಟಡೇನು ಹೊನ್ನಿನಾಸೆ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಹೆಣ್ಣ ಬಿಟ್ಟಡೇನು ಹೊನ್ನಿನಾಸೆ ಉಳ್ಳನ್ನಬರ ? ಅಲ್ಲಿಗೆ ಹಿರಿಯತನ ಸಾಲದು. ಹೊನ್ನ ಬಿಟ್ಟಡೇನು ಮಣ್ಣಿನಾಸೆ ಉಳ್ಳನ್ನಬರ ? ಅಲ್ಲಿಗೆ ಹಿರಿಯತನ ಸಾಲದು. ಅವುಗಳೊಳಗೊಂದ ಹಿಡಿದಡೆಯೂ ಆ ತ್ರಿವಿಧವ ಹಿಡಿದವ
ಆ ಮಾಯೆ ಒಂದ ಬಿಟ್ಟೊಂದಿರದಾಗಿ. ಅವನತಿಗಳೆದಲ್ಲದೆ ಭವಂ ನಾಸ್ತಿಯಾಗದು. ಇದು ಕಾರಣ_ಕೂಡಲಚೆನ್ನಸಂಗಮದೇವಾ ಈ ತ್ರಿವಿಧಮಲವ ಕಳೆದು ಸುಳಿವ ನಿಜಸುಳುಹಿಂಗೆ ನಮೋ ನಮೋ ಎಂಬೆನಯ್ಯಾ.