ಹೇಳಿಗೆಯೊಳಗಣ ಸರ್ಪ, ಈರೇಳುಲೋಕಂಗಳ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಹೇಳಿಗೆಯೊಳಗಣ ಸರ್ಪ
ಈರೇಳುಲೋಕಂಗಳ ನುಂಗಿತ್ತು; ಈರೇಳು ಲೋಕ ನುಂಗಿ ಕಾಳಕೂಟವಿಷವನೆ ಉಗುಳುತ್ತಿದೆ ನೋಡ. ಆ ವಿಷದ ಹೊಗೆ ಹತ್ತಿ ಎಲ್ಲಾ ಪ್ರಾಣಿಗಳು `ಪಶುಪತಿ ಪಶುಪತಿ' ಎನುತ್ತಿರಲು ವಿಷದ ಹೊಗೆ ಕೆಟ್ಟಿತ್ತು
ಹೇಳಿಗೆ ಮುರಿಯಿತ್ತು; ಈರೇಳುಲೋಕದ ನುಂಗಿದ ಸರ್ಪ ತಾನು ಸತ್ತಿತ್ತು. ಇದು ಮಾನವರು ಅರಿವುದಕ್ಕೆ ಉಪಮಾನವಿಲ್ಲ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.