ಹೊನ್ನಿಂಗೆ ಕೂರ್ತು ಜಂಗಮವನವಿಶ್ವಾಸವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹೊನ್ನಿಂಗೆ ಕೂರ್ತು ಜಂಗಮವನವಿಶ್ವಾಸವ ಮಾಡುವೆ
ಹೆಣ್ಣಿಂಗೆ ಕೂರ್ತು ಜಂಗಮವನವಿಶ್ವಾಸವ ಮಾಡುವೆ
ಮಣ್ಣಿಂಗೆ ಕೂರ್ತು ಜಂಗಮವನವಿಶ್ವಾಸವ ಮಾಡುವೆ
ಎಲೆ ಕುಚಿತ್ತಮನವೆ
ಕುಚಿತ್ತಾಶ್ರಯದಲ್ಲಿ ಎನ್ನನಿರಿಸದಿರಾ ಸುಚಿತ್ತವಾಗಿ ಬಸವನೆಂದೆನಿಸಾ ಕೂಡಲಚೆನ್ನಸಂಗಯ್ಯಾ
ಎನ್ನ ಚಿತ್ತವು ಕಾಡಿಹುದಯ್ಯಾ.