ಹೊನ್ನ ಹಾವುಗೆಯ ಮೆಟ್ಟಿದವನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಹೊನ್ನ ಹಾವುಗೆಯ ಮೆಟ್ಟಿದವನ ! ಮಿಡಿಮುಟ್ಟಿದ ಕೆಂಜೆಡೆಯವನ ! ಮೈಯಲ್ಲಿ ವಿಭೂತಿಯ ಹೂಸಿದವನ ! ಕರದಲ್ಲಿ ಕಪಾಲವ ಹಿಡಿದವನ ! ಅರ್ಧನಾರಿಯಾದವನ ! ಬಾಣನ ಬಾಗಿಲ ಕಾಯ್ದವನ ! ನಂಬಿಗೆ ಕುಂಟಣಿಯಾದವನ ! ಚೋಳಂಗೆ ಹೊನ್ನಮಳೆಯ ಕರೆದವನ ! ಎನ್ನ ಮನಕ್ಕೆ ಬಂದವನ ಸದ್ಭಕ್ತರ ಹೃದಯದಲಿಪ್ಪವನ ! ಮಾಡಿದ ಪೂಜೆಯಲೊಪ್ಪುವನ ! ಕೂಡಲಸಂಗಯ್ಯನೆಂಬವನ !! 502