ಹೊರವೇಷದ ವಿಭೂತಿರುದ್ರಾಕ್ಷಿಯನಳವಡಿಸಿಕೊಂಡು ವೇದಶಾಸ್ತ್ರ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಹೊರವೇಷದ ವಿಭೂತಿರುದ್ರಾಕ್ಷಿಯನಳವಡಿಸಿಕೊಂಡು ವೇದಶಾಸ್ತ್ರ ಪುರಾಣ
ಪುರಾತರ ವಚನದ ಬಹುಪಠಕರು
ಅನ್ನದಾನ
(ಹೊನ್ನದಾನ)
ವಸ್ತ್ರದಾನವನೀವನ ಬಾಗಿಲ ಮುಂದೆ ಮಣ್ಣಪುತ್ಥಳಿಯಂತಿಹರು ನಿತ್ಯನೇಮದ ಹಿರಿಯರು. ``ವಯೋವೃದ್ಧಾಸ್ತಪೋವೃದ್ಧಾ ವೇದವೃದ್ಧಾ ಬಹುಶ್ರುತಾಃ ಇತ್ಯೇತೇ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ ಎಂಬ ಶ್ರುತಿ ದಿಟವಾಯಿತ್ತು. ಆ ಎಲ್ಲಾ ಅರಿವು?್ಳವರು ಲಕ್ಷ್ಮಿಯ ದ್ವಾರಪಾಲಕರಾದರು. ಅರಿವಿಂಗೆ ಇದು ವಿಧಿಯೆ ? ಕೂಡಲ ಚೆನ್ನಸಂಗಯ್ಯಾ ನೀ ಮಾಡಿದ ಮರಹು !