ವಿಷಯಕ್ಕೆ ಹೋಗು

ಹೊರಸಿನೆಕ್ಕೆಯ ಶಂಖದ ಮಣಿಯ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಹೊರಸಿನೆಕ್ಕೆಯ ಶಂಖದ ಮಣಿಯ ಪವಣಿಸಬಲ್ಲವರು ನೀವಾರಾದಡೂ ಪವಣಿಸಿರಯ್ಯಾ
_ಇದ ನಾನರಿಯೆನಯ್ಯಾ. ಒಂದು ತಾಳಮರದ ಮೇಲೆ ಮೂರು ರತ್ನವಿಹುದ ನಾ ಬಲ್ಲೆ: ಒಂದು ರತ್ನ ಉತ್ಪತ್ಯ_ಸ್ಥಿತಿ_ಲಯಕ್ಕೊಳಗಾಯಿತ್ತು. ಒಂದು ರತ್ನ ಹದಿನಾರು ಭುವನಕ್ಕೆ ಬೆಲೆಯಾಯಿತ್ತು. ಇನ್ನೊಂದು ರತ್ನಕ್ಕೆ ಬೆಲೆಯಿಲ್ಲವೆಂದು ಗುಹೇಶ್ವರ ಲಿಂಗೈಕ್ಯವು._ನಿಶ್ಶಬ್ದಂ ಬ್ರಹ್ಮ ಉಚ್ಯತೇ.