ಹೋ ಹೋ ಗುರುವೆ ನಿಮ್ಮ ಚಮ್ಮಾವುಗೆಯ ಬಂಟ ನಾನಾಗಿರಲು ಅಂಜುವರೆ ? ಅಳುಕುವರೆ ? ಸಂಗಮನಾಥ ಬಂದು
ನಿಮ್ಮ ಮನವ ನೋಡಲೆಂದು ತಮ್ಮ ಮನವನಡ್ಡಲಿಕ್ಕಿದನೊಂದು ಲೀಲೆಯಿಂದ. ಅದು ನಿಮಗೆ ಸಹಜವಾಗಬಲ್ಲುದೆ ? ಮಂಜಿನ ಮೋಹರ
ರವಿಯ ಕಿರಣವ ಕೆಡಿಸಲಾಪುದೆ ? ನಿಮ್ಮ ನೆನೆವರಿಗೆ ಸಂಸಾರವಿಲ್ಲೆಂದು ಶ್ರುತಿಗಳು ಹೊಗಳುತ್ತಿರಲು ನಿಮ್ಮ ಅರುಹಿಂಗೆ ಕೇಡುಂಟೆ ? ಕೂಡಲಚೆನ್ನಸಂಗನ ಶರಣರ ಕರೆವಡೆ ಎನ್ನ ಮನವೆಂಬ ಚಮ್ಮಾವುಗೆಯ ಮೆಟ್ಟಿ ನಡೆಯಾ ಸಂಗನಬಸವಣ್ಣ