೧೦. ಏನು ಪ್ರಪಂಚವಿದು

ವಿಕಿಸೋರ್ಸ್ದಿಂದ
Jump to navigation Jump to search


ಏನು ಪ್ರಪಂಚವಿದು! ಏನು ಧಾಳಾಧಾಳಿ! |
ಏನದ್ಭುತಾಪ್ರಶಕ್ತಿಬಿರ್ಘಾತ! ||
ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? |
ಏನರ್ಥವಿದಕೆಲ್ಲ? - ಮಂಕುತಿಮ್ಮ || ೧೦

ಈ ಪ್ರಪಂಚ ಎನ್ನುವುದು ಏನು? ಏನು ಮುತ್ತಿಗೆಗಳು? ಎಷ್ಟು ಅದ್ಭುತವಾದ, ಅಪಾರವಾದ ಶಕ್ತಿ ಇದರಲ್ಲಿ ಅಡಗಿದೆ.
ಎಷ್ಟು ಜೋರಾದ ಹೊಡೆತಗಳನ್ನು(ನಿರ್ಘಾತ), ಇದು ಎಲ್ಲರಿಗು ಕೊಡುತ್ತಿದೆ. ಇಷ್ಟೆಲ್ಲಾ ಇದ್ದರು ಮನುಷ್ಯನ ಗುರಿ ಏನು? ಅವನಿಗೆ ಏನು ಬೆಲೆ?
ಇದರ ಅಂತ್ಯವೇನು? ಇವುಗಳೆಲ್ಲ ತಿಳಿಯುತ್ತಿಲ್ಲವಲ್ಲ? ಇವುಗಳಿಗೆಲ್ಲ ಏನು ಅರ್ಥ? ಇವು ಬಹಳ ಅಸ್ಪಷ್ಟವಾಗಿದೆ.