೧೨. ಮಾನವರೋ ದಾನವರೋ?

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು


ಮಾನವರೋ ದಾನವರೋ ಭೂಮಾತೆಯನ್ನು ತಣಿಸೆ|
ಶೋಣಿತವನೆರೆಯುವರು ಬಾಷ್ಪ ಸಲುವುದಿರೆ?||
ಏನು ಹಗೆ! ಏನು ಧಗೆ! ಏನು ಹೊಗೆ? ಯೀ ಧರಣಿ|
ಸೌನಿಕನ ಕಟ್ಟೆಯೇಂ? - ಮಂಕುತಿಮ್ಮ|| ೧೨

ಶೋಣಿತವನು+ಏರೆಯುವರು) (ಬಾಷ್ಪ+ಸಲುವುದು+ಇದು)

ಇವರೇನು ಮನುಷ್ಯರೋ ಅಥವ ರಾಕ್ಷಸರೋ, ಈ ಭೂಮಾತೆಯನ್ನು ತೃಪ್ತಿ ಪಡಿಸಲು, ಕಣ್ಣೀರು(ಬಾಷ್ಪ) ಸುರಿಸುವುದರ ಬದಲು,
ರಕ್ತವನ್ನು(ಶೋಣಿತ)ಸುರಿಯುತ್ತಿದ್ದರೆ. ಈ ಪ್ರಪಂಚದಲ್ಲಿರುವ ಹಗೆ ಮತ್ತು ಹೊಗೆಗಳನ್ನು ನೋಡಿದರೆ, ಇದು ಕಟುಕನ(ಸೌನಿಕ) ಜಗಲಿಯಂತೆ ಕಾಣುತ್ತಿದೆ.