೧೩. ಪುರುಷಸ್ವತಂತ್ರತೆಯ

ವಿಕಿಸೋರ್ಸ್ದಿಂದ
Jump to navigation Jump to search


ಪುರುಷಸ್ವತಂತ್ರತೆಯ ಪರಮಸಿದ್ದಿಯದೇನು?|
ಧರಣಿಗನುದಿನದ ರಕ್ತಾಭಿಷೇಚನೆಯೆ?||
ಕರವಾಲನ್ನು ಪುಷ್ಪಸರವೆಂದು ಸೆಳೆದಾಡೆ|
ಪರಿಮಳವ ಸೂಸುವುದೆ? - ಮಂಕುತಿಮ್ಮ|| ೧೩

(ಪರಮ+ಸಿದ್ದಿ+ಅದೇನು)(ಧರಣಿಗೆ+ಅನುದಿನದ) (ರಜ್ತ+ಅಭಿಷೇಚನೆ)

ಎಲ್ಲರಿಗು ಸ್ವತಂತ್ರ ಬಂದದುರ ಪರಿಣಾಮವೇನಾಗಿದೆ?ಅವರುಗಳೆಲ್ಲ ಸಾದಿಸುವುದಾದರು ಏನು? ಇದರಿಂದ ಆದ ಪರಿಣಾಮ ಕೇವಲ ಯುದ್ಧ,
ಕಲಹ ಮತ್ತು ಈ ಭೂಮಿತಾಯಿಗೆ ಪ್ರತಿದಿನವು ರಕ್ತದಿಂದ ಸ್ನಾನ ಅಷ್ಟೆ. ಬೀಸು ಕತ್ತಿಯನ್ನು(ಕರವಾಲ),
ಹೂವಿನ ಮಾಲೆಯೆಂದುಕೊಂಡು ಎಳೆದಾಡಿದರೆ, ಆಗುವ ಪರಿಣಾಮ, ಕೈಯೆಲ್ಲ ರಕ್ತವಾಗುತ್ತದೆಯೇ ಹೊರೆತು, ಅದೇನು ಹೂವಿನ ಸುಗಂಧವನ್ನು ಹರಡುತ್ತದೇನು(ಸೂಸು)?