೧೪ ಒಂದೆ ಗಗನವ ಕಾಣುತೊಂದೆ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು


ಒಂದೆ ಗಗನವ ಕಾಣುತೊಂದೆ ನೆಲವನು ತುಲಿಯು |
ತೊಂದೆ ಧ್ಯಾನವನುಣ್ಣುತೊಂದೆ ನೀರ್ಗುರ್ಡಿದು ||
ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು |
ಬಂದುದೀ ವೈಷಮ್ಯ ? - ಮಂಕುತಿಮ್ಮ || ೧೪

(ಕಾಣುತ+ಒಂದೆ) (ತುಳಿಯುತ+ಒಂದೆ) (ಧ್ಯಾನವನು+ಉಣ್ಣುತ+ಒಂದೆ) (ನೀರು+ಕುಡಿದು)
(ಗಾಳಿಯನು+ಉಸಿರ್ವ) (ನರಜಾತಿ+ಒಳಗೆ+ಎಂತು)

ಈ ಪ್ರಪಂಚದಲ್ಲಿರುವ ಜನಗಳೆಲ್ಲವೂ ಉಸಿರಾಡುವ ಗಾಳಿ, ಒಡಾಡುವ ನೆಲ, ಕುಡಿಯುವ ನೀರು ಮತ್ತು ನೋಡುವ ಆಕಾಶ,
ಒಂದೇ ಆಗಿರಲು, ನರ-ನರರ ನಡುವೆ ದ್ವೇಷ-ವಿರಸಗಳು ಹೇಗೆ ಉಂಟಾಯಿತೋ (ವೈಷಮ್ಯ) ತಿಳಿದಿಲ್ಲ.