೧೬ ಇಳೆಯ ಬಿಟ್ಟಿನ್ನುಮೆತ್ತಲುಮೈದದ

ವಿಕಿಸೋರ್ಸ್ದಿಂದ
Jump to navigation Jump to search


ಇಳೆಯ ಬಿಟ್ಟಿನ್ನುಮೆತ್ತಲುಮೈದದ ಪ್ರೇತ |
ವಲೆವಂತೆ ಲೋಕ ತಲ್ಲಣಿಸುತಿಹುದಿಂದು ||
ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ |
ತಳಮಳಕೆ ಕಡೆಯೆಂದೂ? - ಮಂಕುತಿಮ್ಮ || ೧೬

(ಬಿಟ್ಟು+ಇನ್ನುಂ+ಎತ್ತಲುಂ+ಐದದ+ಪ್ರೇತ+ಅಲೆವಂತೆ) (ತಲ್ಲಣಿಸುತಿಹುದು+ಇಂದು)
ಈ ಜಗತ್ತನ್ನು ಬಿಟ್ಟರೂ, ಬೇರೆ ಲೋಕವನ್ನು ಸೇರದೆ ಇಲ್ಲೇ ಅಲೆದಾಡುತ್ತಿರುವ ಪ್ರೇತದಂತೆ, ಈ ಲೋಕ, ಈವತ್ತು ಒಂದು ವಿಧವಾದ ಒದ್ದಾಟದಲ್ಲಿದೆ.
ಹಳೆಯ ಧರ್ಮ ನಶಿಸಿದ್ದರೂ, ಹೊಸ ಧರ್ಮ ಇನ್ನೂ ಹುಟ್ಟಿಲ್ಲವಾದ್ದರಿಂದ, ಈ ಗಾಬರಿಗೆ ಬಿಡುಗಡೆ ಯಾವಾಗ ?