೬. ಒಗಟೆಯೇನೀ ಸೃಷ್ಟಿ

ವಿಕಿಸೋರ್ಸ್ದಿಂದ
Jump to navigation Jump to search


ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು!
ಬಗೆದು ಬಿಡಿಸುವರಾರು ಸೋಜಿಗವನಿದನು?||
ಜಗವ ನಿರವಿಸಿದ ಕೈಯೊಂದಾದೊಡೇಕಿಂತು?|
ಬಗೆ ಬಗೆಯ ಜೀವಗತಿ - ಮಂಕುತಿಮ್ಮ||

(ಒಗಟೆ+ಏನು+ಈ) ( ಬಾಳಿನ+ಅರ್ಥವದು+ಏನು) (ಬಿಡಿಸುವರು+ಆರು)(ಸೋಜಿಗವನು+ಇದನು) (ಕೈ+ಒಂದು+ಆದೊಡೆ+ಏಕೆ+ಇಂತು)

ಈ ಸೃಷ್ಟಿ ಎನ್ನುವುದು ಕಗ್ಗಂಟೋ ಏನು? ಈ ಬಾಳಿಗೆ ಏನಾದರು ಅರ್ಥವಿದೆಯೇ? ಈ ಆಶ್ಚರ್ಯಕಗ್ಗಂಟನ್ನು ಯೋಚಿಸಿ, ಯಾರು ಬಿಡಿಸಬಲ್ಲರು?
ಈ ಜಗತ್ತನ್ನು ಒಂದು ಕಾಣದ ಕೈ ನಿರ್ಮಿಸಿದೆ(ನಿರವಿಸಿದೆ) ಎಂದರೆ, ಈ ವಿಧ ವಿಧವಾದ ಜೀವಗತಿಗಳು ಏಕೆ?