೭. ಬದುಕಿಗಾರ್ ನಾಯಕರು

ವಿಕಿಸೋರ್ಸ್ದಿಂದ
Jump to navigation Jump to search


ಬದುಕಿಗಾರ್ ನಾಯಕರು, ಏಕನೊ ಅನೇಕರೊ?|
ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ?||
ಕುದುರುವುದೆಂತು ಈಯವ್ಯವಸ್ಥೆಯ ಪಾಡು?|
ಅದಿಗುದಿಯೆ ಗತಿಯೇನು? - ಮಂಕುತಿಮ್ಮ|| ೭||

(ಬದುಕಿಗೆ+ಆರ್) (ಕುದುರುವುದು+ಅದು+ಎಂತೊ) (ಈ + ಅವ್ಯವಸ್ಥೆಯ)

ಈ ಬದುಕಿಗೆ ನಾಯಕರು ಯಾರು? ಒಬ್ಬನೆ ಒಬ್ಬನೊ ಅಥವ ಬಹು ಮಂದಿ ಇದ್ದರೆಯೋ? ವಿಧಿಯೋ, ಪುರುಷ ಪ್ರಯತ್ನವೋ?
ಧರ್ಮದ ಶಕ್ತಿಯೋ ಅಥವ ಒಂದು ಅಂಧ ಬಲವೋ? ಈ ಅವ್ಯವಸ್ಥೆಯ ಪಾಡು ಸರಿಯಾಗುವುದು(ಕುದುರುವುದು) ಹೇಗೆ? ಇಲ್ಲ,
ಈ ತಳಮಳದಲ್ಲಿಯೇ(ಅದಿಗುದಿ) ನಾವು ಯಾವಾಗಲು ಇರಬೇಕೆ?