೨೨೨ ಸತೀಹಿತೈಷಿಣಿ (ಿ ಮಾಸಿಕ / 14 / Y
- \/\
ಎಡಗೈಯ್ಯಲ್ಲಿ ತಲೆಗೆ ಹಾಕಿಕೊಂಡಿದ್ದ ಟೊಪ್ಪಿಗೆಯನ್ನೂ ಹಿಡಿದು ಅಚ್ಚ ಟೊಪ್ಪಿಗೆ ಸಾಹೇಬರಂತೆ ಉಡುಪನ್ನು ಧರಿಸಿ ಮೆರೆಯುತ್ತಿರುವುದನ್ನು ಕಂಡು ಪ್ರಭಾಕರನು ತಲೆದೂಗಿ ನಕ್ಕು ನಿಂತಿದ್ದವನ ಕೊರಳಮೇಲೆ ಕಲ್ಕಿರಿಸಿ, ನಗುತ್ತ-'ಸಾಹೇಬರೇ ! ಬರಿಗಾಲಿಂದ ಬಂದಿರುವಂತಿದೆ ! ಹಾಗೇಕೆ ? ಅಗ್ನಿ ಹೋತ್ರವನ್ನು ಮಾಡುತ್ತಿರುವಿರೋ ? ಇಲ್ಲ-ಬಿಟ್ಟು ಬಿಟ್ಟಿರುವರೋ ? ತರುಣ-ಅಹುದಯ್ಯ, ನೀವು ವೈದಿಕಸಾರ್ವಭೌಮರಾಗಿರುವಿರಿ. ನಿ ಮ್ಮನ್ನು ನೋಡಲು ಬರಬೇಕಾದರೆ ಬೂಟುಗಳನ್ನು ಬಿಟ್ಟು ಬರ ಬೇಕಾಯ್ತಲ್ಲವೆ ? ಅಗ್ನಿಹೋತ್ರವೆಂದರೆ ಅದನ್ನು ಹೇಗೆ ಬಿಡಲಾ ದೀತು ? ಈಗಿನ ಸೋಮಯಾಜಿ ವಂಶದವರು, ದೀಕ್ಷಿತವರ್ಗದ ವರು, ಅವಧಾನಿಗಳು, ಸಿದ್ಧಾಂತಿಗಳು ಮೊದಲಾದವರೆಲ್ಲಾ ಈಗ ಉಂಡಾಡಿಭಟ್ಟರಾಗಿ ಹೊಟ್ಟೆ ಹೊರೆಯುತ್ತಿರುವವರಾದರೆ, ಅಗ್ನಿ ಹೋತ್ರ: ಸೋಮಪಾನಗಳನ್ನು ಪಾಲಿಸುವವರಾರು ?ಅವು ಅನನ್ಯ ಶರಣ್ಯಭಾವದಿಂದನಮ್ಮನ್ನೇ ಆಶ್ರಯಿಸಿದವು. ಮತ್ತೇನು? ಇಷ್ಟರಲ್ಲಿ ಕಿರುಮನೆಯಲ್ಲಿ ಕುಳಿತಿದ್ದ ಕುಮುದವಿತ್ರನು ಅಲ್ಲಿಗೆ ಬಂದು ಇಬ್ಬರನ್ನೂ ತನ್ನೆ ರಡು ತೋಳುಗಳಿಂದ ಬಿಗಿದಪ್ಪಿ, ಬನ್ನಿ ರಿ, ಸಾಹೇಬರೆ-ವೈದಿಕಮಹಾಶಯರೆ' ಎಂದು ಹೇಳುತ್ತ ಇಬ್ಬರನ್ನೂ ತ್ವರೆಗೊಳಿಸಿ ಕರೆತಂದು ಅಕ್ಷಯ ಕಲಾಧದವರ ಮುಂದೆ ನಿಲ್ಲಿಸಿ ಹಾ ಸ್ಯದಿಂದ ಹೇಳಿದನು,-tಏಕೆ ನೋಡುವಿರಿ ? ಮಿತ್ರರೆ ! ತಿಳಿಯಲಿಲ್ಲವೆ ? ಇವರೇ ರಸಿಕಾಗ್ರೇಸರಚಕ್ರವರ್ತಿ ಮಹಾಶಯರಾದ ಬೃಹತ್ತೇನಮಹಾ ರಾಜರು! ಹೀಗೇಕೆ ನೋಡುವಿರಿ ? ಸ್ವಾಗತಿಸುವದಿಲ್ಲವೆ ? ಪ್ರಭಾಕರ-ನಾನೇ ನಿಮ್ಮೆಲ್ಲರ ಪ್ರತಿನಿಧಿಯಾಗಿ ಸ್ವಾಗತವನ್ನು ಕೋರಿ ರುವೆನು. ಸಾಹೇಬರು ಅದಕ್ಕೆ ಪ್ರತಿಯಾಗಿ ನಿಮ್ಮಲ್ಲಿ ಸಾನು